ನಾಟಕ

ಕಣಿವೆಯ ಹಾಡು

- ಡಾ. ಮೀರಾ ಮೂರ್ತಿ -


"ದಕ್ಷಿಣ ಆಫ್ರಿಕಾದ ಅತೋಲ್ ಫ್ಯುಗಾರ್ಡ್ ಕಳೆದ ಶತಮಾನದ ಪ್ರಸಿದ್ಧ ನಾಟಕಕಾರ. ಆತನ ದ ವ್ಯಾಲಿ ಸಾಂಗ್ ನ ಕನ್ನಡ ರೂಪ ಈ ಕೃತಿ. ಆತನ ಸಮಕಾಲೀನ ಜನಜೀವನವನ್ನು ಬಿಂಬಿಸುವ ಈ ನಾಟಕ ಮನಕಲಕುವಂತಹುದು. ಎರಡು ತಲೆಮಾರುಗಳ ಆಲೋಚನೆಗಳ ನಡುವೆ ಇರುವ ಅಂತರವನ್ನು ಇದರ ವಸ್ತು ಒಳಗೊಂಡಿದೆ. ಬದಲಾವಣೆಯನ್ನು ಬಯಸದ ಹಳೆಯ ತಲೆಮಾರು, ಬದಲಾವಣೆಯೇ ಬದುಕು ಎನ್ನುವ ತರುಣ ಜನಾಂಗ ಇವುಗಳ ಸಂಘರ್ಷ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಜೊತೆಗೆ ಹಳ್ಳಿಗಳ ಮೇಲೆ ಆಗುತ್ತಿದ್ದ ಮತ್ತು ಆಗುತ್ತಿರುವ ನಗರೀಕರಣ ಪ್ರಭಾವ ಇಲ್ಲಿ ಕಾಣಬರುತ್ತದೆ. ಎರಡು-ಮೂರು ಪಾತ್ರಗಳ ಮೂಲಕವೇ ತನ್ನ ಉದ್ದೇಶವನ್ನು ಸಾಧಿಸಿರುವುದು, ನಾಟಕಕಾರನೇ ಇಲ್ಲಿನ ಒಂದು ಪಾತ್ರವಾಗಿ ನಾಟಕಕ್ಕೆ ಬೇರೊಂದು ಆಯಾಮವನ್ನು ನೀಡಿರುವುದು ಇಲ್ಲಿನ ವಿಶೇಷ.
"
ಪುಸ್ತಕದ ಕೋಡ್ KBBP 0171
ಪ್ರಕಾರಗಳು ನಾಟಕ
ಲೇಖಕರು ಡಾ. ಮೀರಾ ಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2013
ಬೆಲೆ 30/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 21/-
ಪುಟಗಳು 84

ಬಯಕೆ ಪಟ್ಟಿ