ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಥೆಗಳು

ಯುಗದ ಹೆಜ್ಜೆ

- ಡಾ.ಎಂ.ಎಸ್.ವೀರಘಂಟಿಮಠ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು 2014ರ ಸೆಪ್ಟೆಂಬರ್ ಮಾಹೆಯಲ್ಲಿ ಹಮ್ಮಿಕೊಂಡಿದ್ದ ಅನುವಾದ ಕಾರ್ಯಾಗಾರದಲ್ಲಿ ಆಯ್ಕೆ ಮಾಡಿದ, 16 ಜನ ಹಿಂದಿ ಮಹಿಳಾ ಶ್ರೇಷ್ಠ ಕಥೆಗಾರ್ತಿಯರ ಕನ್ನಡ ಅನುವಾದ ಸಂಕಲನವೇ ‘ಯುಗದ ಹೆಜ್ಜೆ’. ಇಲ್ಲಿನ ಎಲ್ಲಾ ಮೂಲ ಕಥಗಳ ಲೇಖಕರು ಸ್ತ್ರೀಯರೇ ಆಗಿರುವುದರಿಂದ ಸಹಜವಾಗಿಯೇ ಕಥೆಗಳೆಲ್ಲವೂ ಸ್ತ್ರೀ ಕೇಂದ್ರಿತವಾಗಿಯೇ ಇವೆ. ಗೌರಿ, ಭೂಮಿಸುತೆ, ನಿಮ್ಮ ಚಿಕ್ಕಮಗಳು, ಸುನಂದಾ ಹುಡುಗಿಯ ದಿನಚರಿ ಮುಂತಾದ ಕಥೆಗಳಲ್ಲಿ ಹೆಣ್ಣುಗಳು ಎಂಥೆಂಥಾ ಹತಾಶ, ದರಿದ್ರ, ದುರಂತ ಭಯಂಕರ ಸ್ಥಿತಿಗಳನ್ನು , ಎದುರಿಸುವ ಸನ್ನಿವೇಶಗಳನ್ನು ದೃಶ್ಯೀಕರಿಸುತ್ತವೆ. ಅಲ್ಲದೆ ಇಲ್ಲಿನ ಕಥೆಗಳಲ್ಲಿ ರಾಜಕೀಯ ಸ್ಥಿತ್ಯಂತರದಿಂದ ಉಂಟಾಗುವ ಯಾತನಾಮಯ ಬದುಕು, ಗಂಡನ ದೌರ್ಜನ್ಯಕ್ಕೊಳಗಾದರೂ ಆತನಿಗಾಗಿ ಮರುಗುವ ಹೆಣ್ಣು, ರಾಜಿಯಾಗುವ ಮುಗ್ಧ ಗ್ರಾಮೀಣ ಜನತೆಯ ಜಂಜಡಗಳು, ಮಾನವೀಯತೆ, ಪರಿಸರ ಕಾಳಜಿಗಳನ್ನು ತೋರಿಸುವ ವೈವಿಧ್ಯತೆ, ವೈಶಿಷ್ಟ್ಯಗಳನ್ನು ಒಳಗೊಂಡ ಇಲ್ಲಿನ ಕತೆಗಳು ವಾಸ್ತವ ಜಗತ್ತನ್ನು ಕಣ್ಣ ಮುಂದಿರಿಸುತ್ತವೆ.
ಪುಸ್ತಕದ ಕೋಡ್ KBBP 0242
ಪ್ರಕಾರಗಳು ಕಥೆಗಳು
ಲೇಖಕರು ಡಾ.ಎಂ.ಎಸ್.ವೀರಘಂಟಿಮಠ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 150/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 120/-
ಪುಟಗಳು 288

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.