ತಿಂಗಳ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ತಿಂಗಳ ಕಾರ್ಯಕ್ರಮದ ಚಿತ್ರಗಳು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಮಹಿಳಾ ಸಶಕ್ತೀಕರಣ: ಒಂದು ಪರಿಕಲ್ಪನೆ

- ಹೇಮಲತಾ.ಎಚ್.ಎಮ್ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಪಾರಿಭಾಷಿಕ ಪದಗಳ ವ್ಯಾಪ್ತಿಯನ್ನು ವಿವರಿಸುವ ಕಿರುಹೊತ್ತಗೆಗಳನ್ನು ಹೊರತರುವ ಯೋಜನೆಯಡಿ ಮಹಿಳಾ ಸಶಕ್ತೀಕರಣ : ಒಂದು ಪರಿಕಲ್ಪನೆಯೂ ಒಂದಾಗಿದೆ. ಜಾತಿ, ಧರ್ಮ,ವರ್ಗ, ಜನಾಂಗ ಹಾಗು ಪ್ರಾದೇಶಿಕ ಹಿನ್ನೆಲೆಯಲ್ಲಿ ಭಿನ್ನವಾಗಿರುವ, ಜೈವಿಕ ಹಾಗೂ ಜಂಡರ್ ಕಾರಣದಿಂದಾಗಿ ಜಗತ್ತಿನಾದ್ಯಂತ ಮಹಿಳೆಯರು ಅಸಮಾನತೆ, ತಾರತಮ್ಯಕ್ಕೊಳಗಾಗಿ, ಹಕ್ಕು ಸ್ವಾತಂತ್ರ್ಯಗಳಿಂದ ವಂಚಿತರಾಗಿದ್ದಾರೆ. ಇವರಲ್ಲಿ ಮೂಲಭೂತ ಬದಲಾವಣೆ ತರಲು, ಜನರ ಮನಸ್ಥಿತಿಯಲ್ಲಿ ಬೇರೂರಿರುವ ತಾರತಮ್ಯ ಮನೋಭಾವವನ್ನು ಹೋಗಲಾಡಿಸಲು, ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ, ಮಹಿಳಾ ಸಶಕ್ತೀಕರಣದ ವಿವಿಧ ಆಯಾಮಗಳನ್ನು, ಸ್ತ್ರೀವಾದ, ಆರ್ಥಿಕ ಅಭಿವೃದ್ಧಿ, ರಾಜಕೀಯ, ಕಾನೂನು ಮತ್ತು ಮನೋವಿಶ್ಲೇಷಣಾತ್ಮಕ ದೃಷ್ಟಿಯಿಂದ ವಿವರಿಸಿರುವ ಈ ಕೃತಿಯು ಮಹಿಳಾ ಅಧ್ಯಯನಕಾರರಿಗೆ, ಮಹಿಳಾ ಸಮಸ್ಯೆಗಳಿಗೆ ಪರಿಹಾರ ಹುಡುಕುವವರಿಗೆ ಮತ್ತು ಸ್ತ್ರೀವಾದದ ವಿವಿಧ ಮಗ್ಗಲುಗಳ ಬಗ್ಗೆ ಈ ಕೃತಿ ಉಪಯುಕ್ತ ಮಾಹಿತಿಯನ್ನು ನೀಡುತ್ತದೆ.
ಪುಸ್ತಕದ ಕೋಡ್ KBBP 0244
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಹೇಮಲತಾ.ಎಚ್.ಎಮ್
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 75/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 64/-
ಪುಟಗಳು 102

ಬಯಕೆ ಪಟ್ಟಿ