ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಥೆಗಳು

ಡಾನ್ ಕಿಕ್ಸಾಟನ ಸಾಹಸಗಳು

- ಕೆ.ವಿ.ತಿರುಮಲೇಶ್ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಕನ್ನಡದ ಹೊಸ ತಲೆಮಾರಿನ ಓದುಗರಿಗೆ ಲೋಕಸಾಹಿತ್ಯದ ಬಹುಮುಖ್ಯ ಕೃತಿಗಳ ಮರುನಿರೂಪಣೆಯನ್ನು ಒದಗಿಸುವ ಬಹುಮುಖ್ಯ ಯೋಜನೆಯನ್ನು ಕೈಗೊಂಡಿದ್ದು ಇದರಲ್ಲಿ ಕೆ.ವಿ. ತಿರುಮಲೇಶ್ ಅವರು ಕನ್ನಡಕ್ಕೆ ಅನುವಾದಿಸಿರುವ ಮಿಗುವೆಲ್ ಸರ್ವಾಂಟಿಸ್ ನ ಡಾನ್ ಕ್ವಿಕ್ಸಾಟನ ಸಾಹಸಗಳು ಕೃತಿಯನ್ನು ಪ್ರಕಟಿಸಿದೆ.
ವಿಲಿಯಮ್ ಶೇಕ್ಸ್‌ಪಿಯರನಷ್ಟೆ ಪ್ರಸಿದ್ಧಿ ಪಡೆದ ಸರ್ವಾಂಟಿಸನ ಡಾನ್ ಕ್ವಿಕ್ಸಾಟ್ ಕಾದಂಬರಿಯ ಕಥಾನಾಯಕ ಮಧ್ಯ ವಯಸ್ಸು ದಾಟಿದ ಒಬ್ಬ ಸ್ಪ್ಯಾನಿಶ್ ಮಹಾಶಯ. ಇವನು ಮಧ್ಯಕಾಲೀನ ವೀರ ಸರದಾರರಸ ಕತೆಗಳನ್ನು ಓದಿ ಅದರಲ್ಲಿ ಬರುವ ರಕ್ಕಸರು, ಮಾಂತ್ರಿಕರು ಮುಂತಾದವರನ್ನು ನಿಜದಲ್ಲಿ ಕಾಣುವ ಭ್ರಮೆ ಹೊಂದಿರುತ್ತಾನೆ. ಕಥಾನಾಯಕ ಸಾಂಕೋ ಪಾಂಚಾ ಎಂಬ ಹಳ್ಳಿಗನೊಬ್ಬನನ್ನು ತನ್ನ ಬಂಟನನ್ನಾಗಿ ಮಾಡಿಕೊಳ್ಳುತ್ತಾನೆ. ಕ್ವಿಕ್ಸಾಟನಿಗೆ ಸರದಾರತ್ವದ ಭ್ರಮೆಯಾದರೆ ಸಾಂಕೋಗೆ ಇದರಿಂದ ತನಗೇನಾದರು ದೊಡ್ಡ ಲಾಭ ಸಿಗುತ್ತದೆ ಎಂಬ ಮುಗ್ಧ ನಂಬಿಕೆ. ಇಬ್ಬರೂ ಸಾಹಸಗಳನ್ನು ಹುಡುಕುತ್ತಾ ಹೊರಟು ಅನೇಕ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ವಾಸ್ತವತೆ ಮತ್ತು ಭ್ರಮಾಧೀನತೆ, ಭೂತ ಮತ್ತು ವರ್ತಮಾನಗಳ ಮುಖಾಮುಖಿಗಳನ್ನು ಈ ಕಾದಂಬರಿ ಚಿತ್ರಿಸುತ್ತದೆ.
ಪುಸ್ತಕದ ಕೋಡ್ KBBP 0257
ಪ್ರಕಾರಗಳು ಕಥೆಗಳು
ಲೇಖಕರು ಕೆ.ವಿ.ತಿರುಮಲೇಶ್
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 60/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 48/-
ಪುಟಗಳು 122

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.