ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಪಾಲಿ ವ್ಯಾಕರಣ

- ಡಾ.ಶೋಭ. ಆರ್ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಡಾ. ಬಿ.ಆರ್. ಅಂಬೇಡ್ಕರರು ಬರೆದಿದ್ದ ಪಾಲಿ ಭಾಷೆಯ ವ್ಯಾಕರಣದ ಭಾಗವನ್ನು ಕನ್ನಡಕ್ಕೆ ಅನುವಾದಿಸಿದ್ದು, ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಮಾಲಿಕೆಯಲ್ಲಿ ಪ್ರಕಟಿಸಿದೆ. ಸಂಸ್ಕೃತಕ್ಕೆ ಹತ್ತಿರವಾದದ್ದು ಪಾಲಿ ಭಾಷೆ. ಎರಡೂ ಭಾಷೆಗಳ ವ್ಯಾಕರಣ ನಿಯಮಗಳು ಒಂದೇ ರೀತಿ ಇದ್ದರೂ ವರ್ಣವ್ಯತ್ಯಾಸಗಳಿಂದಾಗಿ ಪಾಲಿ ಭಾಷೆಯ ಶಬ್ದಗಳ ಸ್ವರೂಪ ಸಂಸ್ಕೃತಕ್ಕಿಂತ ಭಿನ್ನ. ಇದರ ಇನ್ನೊಂದು ವೈಶಿಷ್ಟ್ಯವೆಂದರೆ ಸಂಸ್ಕೃತದಲ್ಲಾಗಲೀ, ಕನ್ನಡದಲ್ಲಾಗಲೀ ಹೆಚ್ಚು ಬಳಕೆಯಲ್ಲಿಲ್ಲದ ಮಹಾಪ್ರಾಣ ಮತ್ತು ಞ, ಙ ಮುಂತಾದ ಅನುನಾಸಿಕಗಳ ಬಳಕೆ ಈ ಭಾಷೆಯಲ್ಲಿರುವುದು. ಪಾಲಿ ಭಾಷೆಯ ಓದಿಗೆ ಸಹಾಯಕವಾಗಬಲ್ಲ ರೀತಿಯಲ್ಲಿ ಅಂಬೇಡ್ಕರ್ ಅವರು ಪಾಲಿ ಭಾಷೆಯ ವ್ಯಾಕರಣವನ್ನು ಸಿದ್ಧಪಡಿಸಿದ್ದು, ಅದನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಕೃತಿಯಲ್ಲಿ ಪಾಲಿ ಭಾಷೆಯ ವರ್ಣಮಾಲೆ, ಭಾಷಾ ನಿಯಮ, ಶಬ್ದ ನಿಷ್ಪತ್ತಿ, ವಾಕ್ಯ ರಚನೆ, ಸಾಮಾನ್ಯ ಸಂಭಾಷಣೆಗಳಿದ್ದು ಪಾಲಿ ಭಾಷೆಯ ಕಲಿಕೆಗೆ ಆಕರ ಗ್ರಂಥವಾಗಿದೆ.
ಪುಸ್ತಕದ ಕೋಡ್ KBBP 0034
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಡಾ.ಶೋಭ. ಆರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ ₹ 50/-
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ ಲಭ್ಯವಿಲ್ಲ