2018-19ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು 2017ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು

05 Jan 2019 05:12 pm

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ 2018-19ನೇಸಾಲಿನ ಐದು ವಾರ್ಷಿಕ ಗೌರವಪ್ರಶಸ್ತಿಗಳನ್ನು ಈ ಕೆಳಕಂಡ ಅನುವಾದ ವಿದ್ವಾಂಸರುಗಳಿಗೆ ನೀಡಲು ಪ್ರಾಧಿಕಾರದ ಸರ್ವಸದಸ್ಯರ ಸಭೆಯಲ್ಲಿ ಆಯ್ಕೆಮಾಡಿರುತ್ತದೆ. ಗೌರವಪ್ರಶಸ್ತಿ ಮೊತ್ತ ತಲಾ ರೂ.50,000/-ಗಳ ನಗದು, ಸ್ಮರಣಿಕೆ, ಪ್ರಶಸ್ತಿಫಲಕ, ಹಾರ, ಶಾಲು, ಫಲ-ತಾಂಬೂಲ – ಮುಂತಾದವುಗಳನ್ನು ಒಳಗೊಂಡಿರುತ್ತದೆ. 2018-19ನೇಸಾಲಿನ ಗೌರವಪ್ರಶಸ್ತಿ ಪುರಸ್ಕೃತರು

1 ಶ್ರೀ ಎಲ್.ಎಸ್.ಶೇಷಗಿರಿರಾವ್, ಬೆಂಗಳೂರು  
2 ಶ್ರೀ ಜಿ.ಎಸ್.ಆಮೂರ, ಧಾರವಾಡ  
3 ಶ್ರೀ ಶಾ.ಮಂ.ಕೃಷ್ಣರಾಯ, ಬೆಂಗಳೂರು  
4 ಶ್ರೀ ಕಾಶೀನಾಥ ಅಂಬಲಗಿ, ಕಲಬುರಗಿ  
5 ಶ್ರೀಮತಿ ವೀಣಾಶಾಂತೇಶ್ವರ, ಧಾರವಾಡ  

2017ನೇ ಸಾಲಿನಲ್ಲಿ ಅನುವಾದಗೊಂಡಿರುವ ಐದು ಪುಸ್ತಕಗಳಿಗೆ ‘2017ನೇ ಸಾಲಿನ ಪುಸ್ತಕ ಬಹುಮಾನ’ವನ್ನು ನೀಡಲಾಗಿದೆ. ಈ ಕೆಳಕಂಡ ಅನುವಾದಕರು ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿರುತ್ತಾರೆ. ಪುಸ್ತಕ ಬಹುಮಾನದ ಮೊತ್ತ ಪ್ರತಿ ಪ್ರಕಾರದ ಪುಸ್ತಕಕ್ಕೆ ರೂ.25,000/-ಗಳ ನಗದು, ಪ್ರಶಸ್ತಿಫಲಕ, ಹಾರ, ಶಾಲು, ಫಲ-ತಾಂಬೂಲ – ಮುಂತಾದವುಗಳನ್ನು ಒಳಗೊಂಡಿರುತ್ತದೆ.   2016ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು :

ಕ್ರ.ಸಂ ಪ್ರಕಾರ ಕೃತಿಯಹೆಸರು ಅನುವಾದಕರ ಹೆಸರು
1 ಇಂಗ್ಲಿಷ್ ನಿಂದ ಕನ್ನಡ ಪ್ರೀತಿಯ ನಲವತ್ತುನಿಯಮಗಳು ಶ್ರೀಮತಿ ಮಮತಾ ಜಿ.ಸಾಗರ್
2 ಕನ್ನಡ ದಿಂದ ಇಂಗ್ಲಿಷ್ Shikharasoorya ಶ್ರೀಮತಿ ಲಕ್ಷ್ಮೀಚಂದ್ರಶೇಖರ್
3 ಹಿಂದಿಯಿಂದ ಕನ್ನಡ ಚಿಂತಾಮಣಿ ಶ್ರೀಮತಿ ಜಿ.ವಿ.ರೇಣುಕಾ
4 ಹಿಂದಿಯೇತರ ಭಾರತೀಯ ಭಾಷೆಗಳಿಂದ ಕನ್ನಡ ಜುಮ್ಮಾ ಶ್ರೀ ಸೃಜನ್
5 ಕನ್ನಡ ದಿಂದ ಬೇರೆ ಭಾರತೀಯ ಭಾಷೆಗಳಿಗೆ  ಇಲಾ ಒಕಜೀವಿತಂ ಶ್ರೀ ಸ.ರಘುನಾಥ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbpbengaluru@gmail.com