2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | 2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ : (ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಮಾತ್ರ) - ಹೆಚ್ಚಿನ ಮಾಹಿತಿಗೆ | ೨೦೨೦-೨೧ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು ೨೦೧೯ನೇ ಸಾಲಿನ ಪುಸ್ತಕ ಬಹುಮಾನಗಳ ಕುರಿತು - ಹೆಚ್ಚಿನ ಮಾಹಿತಿಗೆ |

2014ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು

ಕ್ರ.ಸಂ.

ಅನುವಾದಕರ ಹೆಸರು ಮತ್ತು ವಿಳಾಸ

ಬಹುಮಾನ ಪುರಸ್ಕೃತ ಪುಸ್ತಕ

ಮೂಲ ಲೇಖಕರು

ಮೂಲ ಭಾಷೆ

ಅನುವಾದ ಭಾಷೆ

 

1

ಡಾ.ಕೆ.ಎಂ.ಸೀತಾರಾಮಯ್ಯ

#500,15ನೇ,ಮೈನ್,ಶ್ರೀನಿವಾಸ ನಗರ,2ನೇ ಫೇಸ್,

ಎಸ್.ಬಿ.ಎಂ.ಕಾಲೋನಿ,ಬನಶಂಕರಿ 1ನೇ ಸ್ಟೇಜ್ ಬೆಂಗಳೂರು-560050

ದೂ:26797931 ಮೊ:9449204766

ಡಿವೈನ್ ಕಾಮಿಡಿ -2

ಮಹಾಕವಿ ಡಾಂಟೆ ಅಲಿಘರಿ

ಇಟಾಲಿ

ಕನ್ನಡ

2

ಶ್ರೀ ಕೆ.ವಿ.ಅಕ್ಷರ

ಅಕ್ಷರ ಪ್ರಕಾಶನ ‘ನಿನಾಸಂ’ ಹೆಗ್ಗೋಡು,ಸಾಗರ,ಶಿವಮೊಗ್ಗ ಜಿಲ್ಲೆ

ಹೇಗೆ ಬೇಕೋ ಹಾಗೆ

ಷೇಕ್ ಸ್ಪಿಯರ್

ಇಂಗ್ಲಿಷ್

ಕನ್ನಡ

3

ಶ್ರೀ.ಬಿ.ಎಸ್.ಜಯಪ್ರಕಾಶ ನಾರಾಯಣ

# 59,ಶ್ರೀನಿವಾಸನಿಲಯ,3ನೇ ಕ್ರಾಸ್,ಆರ್.ಎಂ.ಎಸ್.ಕಾಲೋನಿ ಪೊಸ್ಟ್ ಆಫೀಸ್ ಹತ್ತಿರ ,ಸಂಜಯನಗರ,ಬೆಂಗಳೂರು-560094ದೂ:080-23516141,

ಮೊ:9480261716

Jeepee.jayaprakash@gmail.com

ನಾನು ಮಲಾಲಾ

ಕ್ರಿಸ್ಟಿನಾ ಲ್ಯಾಂಬಾ

ಇಂಗ್ಲಿಷ್

ಕನ್ನಡ

4

ಪ್ರೊ.ನಗರಗೆರೆ ರಮೇಶ್

#366,8ನೇ ಕ್ರಾಸ್,8ನೇ ಮೈನ್,ಪದ್ಮನಾಭನಗರ,

ಬೆಂಗಳೂರು-560070

ಮೊ:9448485824

nagaragereramesh@yahoo.com

ಮೌರ್ಯರ ಕಾಲದ ಭಾರತ

 

ಇರ್ಫಾನ್ ಹಬೀಬ್

ವಿವೇಕಾನಂದ ಝಾ

ಇಂಗ್ಲಿಷ್

ಕನ್ನಡ

5

ಡಾ.ಕೆ.ಎಂ.ಲೋಕೇಶ್

ಪ್ರಾಧ್ಯಾಪಕರು,ಇತಿಹಾಸ ವಿಭಾಗ

ಮಂಗಳೂರು ವಿಶ್ವವಿದ್ಯಾಲಯ

ಮಂಗಳಗಂಗೋತ್ರಿ-574199,ಮಂಗಳೂರು

ಮೊ:9448982976

ಭಾರತದ ಆರ್ಥಿಕತೆ

ಇರ್ಫಾನ್ ಹಬೀಬ್

ಇಂಗ್ಲಿಷ್

ಕನ್ನಡ

6

Dr.Jayalalitha

Assistant Professor

Dravidian University,Srinivasa vanam,Kuppam-517426

Mob:09959369473/9535477916

ಒಬ್ಬ ಮನುಷ್ಯ..ಒಂದು ಮನೆ..ಒಂದು ಜಗತ್ತು..

ಜಯಕಾಂತನ್

ತಮಿಳು

ಕನ್ನಡ

ಪ್ರೊ.ಕೆ.ಎಂ.ಸೀತಾರಾಮಯ್ಯ

ಹಾಸನ ಜಿಲ್ಲೆಯ ಕೆಂಪಸಾಗರದಲ್ಲಿ ಜನನ. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ. ಬಳಿಕ ಹಲವಾರು ದಶಕಗಳ ಕಾಲ ರಾಜ್ಯದ ಹಲವು ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಣೆ. ಗ್ರೀಕ್ iಹಾಕಾವ್ಯಗಳಾದ ಇಲಿಯಡ್ (೧೯೭೮) ಮತ್ತು ಒಡಿಸ್ಸಿ (೧೯೭೯) ಗಳನ್ನು ಕನ್ನಡ ಗದ್ಯದಲ್ಲಿ ನಿರೂಪಿಸಿದ್ದಾರೆ. ಲ್ಯಾಟಿನ್ ಭಾಷೆಯಲ್ಲಿ ವರ್ಜಿಲ್ ರಚಿಸಿದ ಈನಿಯಡ್ ಕಾವ್ಯದ ಕನ್ನಡಗದ್ಯಾನುವಾದವನ್ನು ಮಾಡಿದ್ದಾರೆ. ಇಟಲಿಯ ಮಹಾಕವಿ ಡಾಂಟೆಅಲಿಘರಿ ರಚಿಸಿದ ಡಿವೈನ್ ಕಾಮೆಡಿಯ ಮೊದಲ ಎರಡು ಭಾಗಗಳನ್ನು ಕನ್ನಡಿಸಿದ್ದಾರೆ. ಇನ್‌ಫರ್ನೋ(ನರಕ ಲೋಕ) ಮೊದಲ ಭಾಗ. ಕೊನೆಯ ಭಾಗ ಪ್ಯಾರಡೈಸ್ (ಪರಮಾನಂದ ಲೋಕ). ಪ್ರೊ.ಕೆ.ಎಂ.ಸೀತಾರಾಮಯ್ಯ ಅವರ ಅನುವಾದಿತ ಕೃತಿ ಡಿವೈನ್ ಕಾಮಿಡಿ-೨ಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ೨೦೧೪ನೇ ಸಾಲಿನ ಕಾವ್ಯ ಪ್ರಕಾರದ ಪುರಸ್ಕಾರವನ್ನು ನೀಡಲಾಗಿದೆ.

ಶ್ರೀ ಅಕ್ಷರ.ಕೆ.ವಿ (೧೯೬೦) ಸಾಗರ,

ನವದೆಹಲಿ, ಇಂಗ್ಲೆಂಡಿನ ಲೀಡ್ಸ್‌ನಲ್ಲಿ ವಿದ್ಯಾಭ್ಯಾಸ. ರಂಗಭೂಮಿಯಲ್ಲಿ ತೀವ್ರವಾದ ಆಸಕ್ತಿ. ಈಗ ನೀನಾಸಮ್ ಮತ್ತು ಅಕ್ಷರ ಪ್ರಕಾಶನಗಳ ನಿರ್ವಹಣೆಯ ಹೊಣೆ. ನಿಡುಗಾಲದಿಂದ ರಂಗತರಬೇತಿ, ರಂಗ ಪ್ರಯೋಗ, ಕೃತಿರಚನೆ, ಅನ್ಯ ಪ್ರಕಾರದ ಕರತಿಗಳ ರಂಗ ರೂಪಗಳ ನಿರ್ಮಾಣ ಇವೇ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಶೇಕ್ಸ್‌ಪಿಯರ್ ರಚಿಸಿದ ಹಲವು ನಾಟಕಗಳನ್ನು ಇಂದಿನ ರಂಗಭೂಮಿಗೆ ಮತ್ತು ಇಂದಿನ ಕನ್ನಡದ ಲಯಗಳಿಗೆ ತಕ್ಕಂತೆ ಮರು ರೂಪಿಸಿದ್ದಾರೆ.  ವೆನಿಸಿನ ವ್ಯಾಪಾರಿ (೨೦೦೩), ಕ್ರಮ ವಿಕ್ರಮ (ಮೆಜರ‍್ಸ್ ಫಾರ್ ಮೆಜರ‍್ಸ್, ೨೦೦೬), ಲಿಯರ್ ಲಹರಿ (೨೦೦೮) ಶಿಶಿರ ವಸಂತ (ವಿಂಟರ‍್ಸ್ ಟೇಲ್ಸ್, ೨೦೧೧) ಇವು ಆ ನಿಟ್ಟಿನಲ್ಲಿ ಮೈದಳೆದ ಕೃತಿಗಳು. ಹಲವು ಸ್ವತಂತ್ರ ನಾಟಕಗಳನ್ನೂ ರಚಸಿದ್ದಾರೆ. ಶ್ರೀ ಕೆ.ವಿ.ಅಕ್ಷರ ಅವರ ಅನುವಾದಿತ ಕೃತಿ ಹೇಗೆ ಬೇಕೋ ಹಾಗೆ ಗೆ  ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ೨೦೧೪ನೇ ಸಾಲಿನ ನಾಟಕ ಪ್ರಕಾರದ ಪುರಸ್ಕಾರವನ್ನು ನೀಡಲಾಗಿದೆ.

 ಶ್ರೀ ಜಯಪ್ರಕಾಶ ನಾರಾಯಣ.ಬಿ.ಎಸ್ (೧೯೭೬)

ಹಾಸನ ಜಿಲ್ಲೆಯ ಅಗ್ರಹಾರ ಬೆಳಗುಲಿಯವರು. ತಿಪಟೂರು, ಮೈಸೂರು, ಬೆಂಗಳೂರುಗಳಲ್ಲಿ ವಿದ್ಯಾಭ್ಯಾಸ. ಪತ್ರಕರ್ತರು. ಈಗ ವಿಜಯ ಕರ್ನಾಟಕ ಪತ್ರಿಕಾ ಬಳಗದಲ್ಲಿದ್ದಾರೆ. ಹಲವು ಸ್ವತಂತ್ರ ಕೃತಿಗಳ ರಚನೆ. ಜೀವನ ಚಿತ್ರಗಳ ನಿರೂಪಣೆ ಮುಖ್ಯ ಆಸಕ್ತಿ. ಕದಡಿದ ಕಣಿವೆ, ಸಾಫ್ಟ್‌ವೇರ್‌ನಿಂದ ಸಾಕ್ಷಾತ್ಕಾರದ ಕಡೆಗೆ ಇವರ ಇತರ ಅನುವಾದ ಕೃತಿಗಳು. ಶ್ರೀ ಬಿ.ಎಸ್.ಜಯಪ್ರಕಾಶ ನಾರಾಯಣ ಅವರ ಅನುವಾದಿತ ಕೃತಿ ನಾನು ಮಲಾಲಾ ಅನುವಾದಕ್ಕೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ೨೦೧೪ನೇ ಸಾಲಿನ ಜೀವನ ಚರಿತ್ರೆ/ಆತ್ಮ ಕಥನ ಪ್ರಕಾರದ ಪುರಸ್ಕಾರವನ್ನು ನೀಡಲಾಗಿದೆ.

ಡಾ.ಜಯಲಲಿತಾ (೧೯೭೧)

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ. ಈಗ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿ. ಕನ್ನಡದಿಂದ ತಮಿಳಿಗೆ ಹಾಗೆಯೇ ತಮಿಳಿನಿಂದ ಕನ್ನಡಕ್ಕೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ಕನ್ನಡದ ಆರು ನೂರು ವಚನಗಳನ್ನು, ವಡ್ಡಾರಾಧನೆ ಕೃತಿಯನ್ನು, ಕುವೆಂಪು ಅವರ ನಾಟಕಗಳ ಕೆಲವು ಆಯ್ದ ಭಾಗಗಳನ್ನು ತಮಿಳಿಗೆ ಅನುವಾದಿಸಿದ್ದಾರೆ. ಒರುವೀಡು, ಒರು ಉಲಗಂ, ಒರು ಮನಿದನ್, ವಾರಸವಿಲ್ ಒರು ಕಡವುಳ್ ಎಂಬ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹೇಸರಗತ್ತೆಗಳು (೨೦೦೯) ಬಾಗಿಲು (೨೦೦೫) ಇವರ ಇತರ ಅನುವಾದಿತ ಕೃತಿಗಳು. ಶಾಸ್ತ್ರ ಸಾಹಿತ್ಯವನ್ನೂ ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಯಾಪರುಂಗಲಾಕ್ಕಾರಿಕೈ ಎಂಬ ತಮಿಳು ಛಂದೋಗ್ರಂಥ ಮತ್ತು ತೊಲ್‌ಕಾಪ್ಪಿಯಂ ಎಂಬ ವ್ಯಾಕರಣ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಡಾ.ಜಯಲಲಿತಾ       ಅವರ ಅನುವಾದಿತ ಕೃತಿ ಒಬ್ಬ ಮನುಷ್ಯ .. ಒಂದು ಮನೆ.. ಒಂದು ಜಗತ್ತು .. ಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ೨೦೧೪ನೇ ಸಾಲಿ ಕಥನ ಪ್ರಕಾರದ ಪುರಸ್ಕಾರವನ್ನು ನೀಡಲಾಗಿದೆ.

ಪ್ರೊ ನಗರಗೆರೆ ರಮೇಶ್ (೧೫.೧೨.೧೯೪೮)

ಪ್ರೊ ನಗರಗೆರೆ ರಮೇಶ್ (೧೯೪೮) ತಿರುಪತಿಯಲ್ಲಿ ಇಂಗ್ಲಿಶ್ ಸಾಹಿತ್ಯದ ಸ್ನಾತಕೋತ್ತರ ಪದವಿ. ನ್ಯಾಶನಲ್ ಕಾಲೆಜಿನ ಗೌರಿಬಿದನೂರು, ಬಸವನಗುಡಿ, ಜಯನಗರ ಶಾಖೆಗಳಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಣೆ. ಕರ್ನಾಟಕದ ಹಲವು ಸಾಮಾಜಿಕ ಸಾಂಸ್ಕೃತಿಕ ಹೋರಾಟಗಳಲ್ಲಿ ಭಾಗಿ. ವೈಚಾರಿಕ ಬರಹಗಳನ್ನು ಕನ್ನಡ ಓದುಗರಿಗೆ ಒದಗಿಸುವ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಗಣಪತಿ (೧೯೮೩) ಆರ್ಯರು (೧೯೯೩) ಅಸ್ಪೃಶ್ಯ ವಸಂತ (೨೦೧೦) ಬೇಕನ್‌ನಿಂದ ಮಾರ್ಕ್ಸ್‌ವರೆಗೆ (೨೦೧೫) ಇವರ ಕೆಲವು ಅನುವಾದಿತ ಕೃತಿಗಳು.  ಖ್ಯಾತ ಇತಿಹಾಸಕಾರ ಪ್ರೊ ನಗರಗೆರೆ ರಮೇಶ್ ಅವರ ಅನುವಾದಿತ ಕೃತಿ ಮೌರ್ಯರ ಕಾಲದ ಭಾರತ ಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ೨೦೧೪ನೇ ಸಾಲಿನ ವೈಚಾರಿಕ ಪ್ರಕಾರದ ಪುರಸ್ಕಾರವನ್ನು ನೀಡಲಾಗಿದೆ.

ಡಾ. ಕೋಡಿರ ಮೊನ್ನಪ್ಪ ಲೋಕೇಶ್

ಕೊಡಗಿನ ವಿರಾಜ ಪೇಟೆಯವರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ. ಅಲ್ಲಿಯೇ ಈಗ ಇತಿಹಾಸ ವಿಭಾಗದ ಪ್ರಾಧ್ಯಾಪಕರು. ಇತಿಹಾಸಕ್ಕೆ ಸಂಬಂಧಿಸಿದ ಹಲವಾರು ವಿದ್ವತ್ ಪ್ರಬಂಧಗಳನ್ನು ಮಂಡಿಸಿದ್ದಾರೆ; ಪ್ರಕಟಿಸಿದ್ದಾರೆ. ಈ. ರಿಕ್ಟರ್ ಅವರ ಎತ್ನೋಗ್ರಾಫಿಕಲ್ ಕಂಪೆಂಡಿಯಮ್ ಆಫ್‌ಕಾಸ್ಟ್ ಅಂಡ್ ಟ್ರೈಬ್ಸ್ ಫೌಂಡ್ ಇನ್ ಕೂರ‍್ಗ್ ಎಂಬ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಡಾ.ಕೆ.ಎಂ.ಲೋಕೇಶ್ ಅವರ ಅನುವಾದಿರ ಕೃತಿ ಭಾರತದ ಆರ್ಥಿಕತೆಗೆ  ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ೨೦೧೪ನೇ ಸಾಲಿನ ವೈಚಾರಿಕ ಪ್ರಕಾರದ ಪುರಸ್ಕಾರವನ್ನು ನೀಡಲಾಗಿದೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in